ಮಾತೃಭಕ್ತಿ ಮೂಡಲಿ ದೇಶ ಶಕ್ತವಾಗಲಿ

ಮಾತೃಭಕ್ತಿ ಮೂಡಲಿ ದೇಶ ಶಕ್ತವಾಗಲಿ || ಪ ||

ಹೇ ಸುಧೀರ ಮೇಲಕೇಳು ಶತ್ರುಬಲವ ಸೀಳು ಹೂಳು
ಭಯವು ವೈರಿಗಾಗಲಿ ಜಯವು ಧರ್ಮಕಾಗಲಿ || 1 ||

ಚಿತಾಭಸ್ಮ ತವ ಪ್ರತಾಪ ಪೃಥ್ವಿ ಪಡೆದ ರಕ್ತಲೇಪ
ಪುನರ್ಜನ್ಮ ತಾಳಲಿ, ಶಸ್ತ್ರನಾದವೇಳಲಿ || 2 ||

ವೀರರೆದ್ದು ಸುಖವನೊದ್ದು ಲೋಹ ಧರಿಸಿ ವಿಜಯವರಸಿ
ವೀರ ಘೋಷಗೈಯಲಿ ಖಡ್ಗ ಹಿಡಿದು ಕೈಯಲಿ || 3 ||

ಭರತಭುವಿಯ ಭಾಗ್ಯರವಿಯ ಉದಯಕರಳಿ ಹೃದಯ ಹೃದಯ
ಧನ್ಯತೆಯನು ಪಡೆಯಲಿ, ನಾಡಪೂಜೆ ನಡೆಯಲಿ || 4 ||

Leave a Reply

Your email address will not be published. Required fields are marked *