ಮಥಿಸಿ ಮೈದಳೆಯುತಿದೆ ಹಿಂದುತ್ವದಮೃತ
ಗತಿಸಿದೆ ವಿದ್ವೇಷ ಹಾಲಾಹಲ ವಿಷ || ಪ ||
ವೇದಗಳ ದರುಶನವ ಲೋಕದೆದುರಲಿ ತೆರೆದು
ಬದುಕಿನುನ್ನತ ಗತಿಯ ಔದಾರ್ಯ ಮೆರೆದು
ನೆಲೆಗೊಳಿಸಿ ನೀತಿಗಳ ನಿರ್ಮಿಸಿದೆ ಧರ್ಮಪಥ
ಕಾಲದ ಸವಾಲುಗಳ ಎದುರಿಸಿದೆ ಸತತ || 1 ||
ಜನಮನವ ಸಂಸ್ಕೃರಿಸಿ ತರತಮದ ಕೆಡುಕಳಿಸಿ
ಬಲದುಪಾಸನೆ ಕಲಿಸಿ ಬಲಿದು ಸಂಘಟಿಸಿ
ಶ್ರೇಷ್ಠ ಸದ್ಗುಣ ಸುಮಗರಳುತಿವೆ ಅನವರತ
ರಾಷ್ಟ್ರ ಸ್ವೀಕರಿಸಿದೆ ಸಂಘ ಸಿದ್ಧಾಂತ || 2 ||
ಧರ್ಮ ಸಂಸ್ಥಾಪನೆಗೆ ಬನ್ನಿರೆಲ್ಲರೂ ಕೂಡಿ
ದುರ್ಮತಿಗೆ ದುರ್ಜನಕೆ ರಣವೀಳ್ಯ ನೀಡಿ
ಗೆಲುವೆ ಗುರಿಯಾಗಿಹುದು ಸೋಲಿಲ್ಲವೆನ್ನುತ
ಛಲದಿ ನಿಜಗೊಳಿಸೋಣ ವಿಜಗೀಷು ಚರಿತ || 3 ||