ಮನದ ದಮನವಿದಲ್ಲ

ಮನದ ದಮನವಿದಲ್ಲ ಪ್ರಶಮನದ ಸದುಪಾಯ
ಚಿತ್ತಚಾಂಚಲ್ಯವನು ತಡೆವ ಭಿತ್ತಿ
ಸ್ವಸ್ಥತನು ಮನದಲ್ಲಿ ಶಕ್ತ ರಾಷ್ಟ್ರೀಯತೆಯು
ಏಕಾತ್ಮಭಾರತದ ದಿವ್ಯ ದೃಷ್ಟಿ || ಪ ||

ಯಮ ನಿಯಮ ಆಸನವೇ ಗುರಿಯಲ್ಲ ಮಾರ್ಗವಿದು
ಮನಸುಗಳ ಸಮನಿಸುವ ಸಮಾಜಯೋಗ
ಧ್ಯಾನ ಜಪಗಳ ಆಚೆ ಶ್ವಾಸ ಸಾಧನೆಯಾಚೆ
ವಿಶ್ವವನೆ ಜೋಡಿಸುವ ವಿಶ್ವಾಸ ಯೋಗ || 1 ||

ಶೂನ್ಯತೆಯ ಚಿಹ್ನೆಯದು ಪೂರ್ಣತೆಯ ಪ್ರತಿರೂಪ
ತ್ಯಾಗಮಾರ್ಗದಿ ಪೂರ್ಣದೆಡೆಗೆ ಪಯಣ
ಉನ್ನತದ ಚಿಂತನೆಯ ಸರಳ ಸುಂದರ ಬದುಕು
ವಿಶ್ವದೇಕಾತ್ಮತೆಯ ಭಾವಯಾನ || 2 ||

One thought on “ಮನದ ದಮನವಿದಲ್ಲ

Leave a Reply

Your email address will not be published. Required fields are marked *