ಕೇಳೋ ಗೆಣೆಯಾ, ಕೇಳೋ ಗೆಣೆಯಾ
ನಿಂದ ಕೈಯ ನಾ ಜೋಡಿಸಿಕೊಂಡು
ಭಾರತ ಮಾತೆಗೆ ಹೇಳುವೆ ಕಣಿಯಾ || ಪ ||
ಅನ್ನರಗಡು ಅಗತೈತಿ, ಬನ್ನ ಬಗಡು ಹೋಗತೈತಿ
ಸಣ್ಣತನ ನೀಗತೈತಿ, ಸಣ್ಣ ಸಣ್ಣತನ ನೀಗತೈತಿ
ಅಣ್ಣ ತಮ್ಮ ಒಂದಾಗತೈತಿ || 1 ||
ಹಿಂದುವಾದಿ ಹಿಂದ್ಯಾಕ ಆದಿ, ಮುಂದೆ ನಡೆದರೈತಿ ಹಾದಿ
ನಿಂದಿರದ ಹಿಂಗ್ಯಕ ಬಿದ್ದಿ, ನೀ ನಿಂದಿರದ ಹಿಂಗ್ಯಕ ಬಿದ್ದಿ
ಚಂದವಲ್ಲವೀ ಮಂಪರು ನಿದ್ದಿ || 2 ||
ತಲಿಗೆಡಿಸೋ ಬುದ್ಧಿ ಸಾಕ, ಛಲ ಬೇಕಾ ನಿಶ್ಚಲ ಬೇಕಾ
ತಳಮಳಿಸೋ ಚಿಂತಿ ಮ್ಯಾಕ, ತಳ ತಳಮಳಿಸೋ ಚಿಂತಿಮ್ಯಾಕ
ತಲೆಗೆ ಕೈಕೊಟ್ಟು ಕುಂತಿ ಯಾಕ || 3 ||
ಸಾರ್ಥಕವಾ ಮಾಡುತೈತಿ, ಸಾಗರವು ನೀರಿನ ಹನಿಯ
ಸುಮ್ಮಕೆ ನೀ ಸೇರದೆ ನಮ್ಮ, ಅರೆ ಸುಮ್ಮಕೆ ನೀ ಸೇರದೆ ನಮ್ಮ
ಯಾತಕೆ ಕಟ್ಟುವೆ ಮಾತಿನ ಮನೆಯಾ || 4 ||