ಜೀವನ ತುಂಬಿದೆ ವಿಫಲತೆಗಳ ರಾಶಿ

ಜೀವನ ತುಂಬಿದೆ ವಿಫಲತೆಗಳ ರಾಶಿ
ಸಫಲತೆ ಹತ್ತಿರ ಹತ್ತಿರವಾಗುತ್ತಲೆ
ದಾರಿಯಿಂದ ದೂರಕೆ ಬಿಟ್ಟೆನು ನೂಕಿ;
ಏನಿದು, ಮೂರ್ಖತನಯೇನಿದು? …. ಅಲ್ಲಲ್ಲ!
ಸಫಲತೆ ವಿಫಲತೆಗಳ ನೀತಿ
ನಾನರಿಹುದೇ ಬೇರೆಯ ರೀತಿ
ಕ್ರಾಂತಿಯ ಶೋಧಕ ನಾ ಮನಸಾರೆ
ಮೆಚ್ಚುವುದಿಚ್ಛಿಸುವುದೇ ಬೇರೆ
ಅವಿರತ ಸೇವೆಯ, ತ್ಯಾಗದ ನವನಿರ್ಮಾಣದ ದಾರಿ
ನಾ ಸಮಗ್ರ ಕ್ರಾಂತಿಯ, ಸಂಘರ್ಷದ ಪಥ ಸಂಚಾರಿ
ಜಗವಾವುದ ವಿಫಲತೆಯೆನ್ನುವುದೋ
ಅದೆ ಶೋಧಕನೇರಿದ ಮಜಲುಗಳು
ಗಗನದವರೆಗೂ ಎಣಿಕೆಗೆ ನಿಲುಕದ ಮಹಲುಗಳು
ಏರಲು ಬೇಕೆನಿಸಿತೋ ಗುರಿ ಸೇರಲು ಸೋಪಾನಗಳು
ಎದುರಾಗುವ ತೊಡಕಿಗೆ, ದಣಿವಿಗೆ ಮಣಿಯದಲೆಸ
ಸ್ವಾರ್ಥದ ಚಿಂತನಯೊಂದಿನಿತೂ ಇಲ್ಲ
ಅರ್ಪಿತವಲ್ಲವೆ ಭಗವಂತನಿಗೆಲ್ಲ !
ಎನ್ನೀ ವಿಫಲತೆಗಳೇ ತಂದಿವೆ ಆನಂದ
ನೆಚ್ಚಿನ ಸಹಪಥಿಕರ ಯುವಜನ ಪಡೆಯ
ಕಂಟಕಾಕೀರ್ಣ ಮಾರ್ಗವು
ಇನಿತಾದರು ಆದರೆ ಸುಗಮ
ವಿಫಲತೆ ತುಂಬಿದ ಈ ಜೀವನವೆನ್ನ
ಸಾರ್ಥಕ ನಿಶ್ಚಿತ, ಶತಶತ ಧನ್ಯ !

ಜಯಪ್ರಕಾಶ ನಾರಾಯಣರ ರಚನೆ (ತುರ್ತು ಪರಿಸ್ಥಿತಿ ಹಾಡು – ಕವನ)

Leave a Reply

Your email address will not be published. Required fields are marked *