ಹುಡುಕುವ ಬಳ್ಳಿ ಹರಿದಾಡಿ ಬಂದು ಕಾಲ ತೊಡರಿದ್ಹಾಂಗ
ಬಯಸಿದ ಮುಕುಟ ಬೆಳಗಾಗ ಬಂದು ಶಿರವನಡರಿದ್ಹಾಂಗ
ಅಖಂಡ ತಾಯಿಯ ಕನಸು ಕಲ್ಪನೆಯ
ಸಾಕಾರದ ಸುಗ್ಗಿ… ಬಂತೇ ತಾನಾಗಿ || ಪ ||
ಪಂಜಾಬದಿ ನೋಡ, ಮಂಜು ಮುಸುಕಿದ ಮೋಡ
ಪಂಜಾಬದಿ ನೋಡ
ಸಂಜೆಯಿಂದ ಮರುಸಂಜೆಯ ತನಕ ಕೊಲ್ಲತಾರ ಸುದ್ದಿ
ಹಂಚಿಕೆ ಹಾಕಿ ದೇಶವ ಮುರಿಯಲು ಮಾಡತಾರ ಬುದ್ಧಿ
ನಾಡಿಗೆ ತಂದರು ಕೇಡ, ಇದು ಪಾಕಿಯ ಕೈವಾಡ
ಪಾಕಿ ಬರಲವರ ಕುಟ್ಟಿ ನೆತ್ತಿಯಾ ಮೆಟ್ಟಿ, ಗಡಿಯ ಹೊರಗಟ್ಟಿ
ಈ ನಾಡ ಮೇಲೆತ್ತಿ… ನಿಲ್ಲೋಣ ಎದೆ ತಟ್ಟಿ || 1 ||
ಕಾಶ್ಮೀರದ ಕತ್ತಿ, ನೆತ್ತಿ ಮ್ಯಾಗ ತೂಗುತ್ತಿ
ಕಾಶ್ಮೀರದ ಕತ್ತಿ
ರಾಷ್ಟ್ರದೊಳಗೆ ಪರರಾಜ್ಯವ ಕಟ್ಟಲು ಹಾಕತಾರ ಹೊಂಚ
ಶಸ್ತ್ರಹಿಡಿದು ಸರಿ ರಾತ್ರಿ ಹಗಲು ಕೊರಿತಾರ ಭೂಮಿಯಂಚ
ಮುಖಂಡ ಜನರಂತಾರ, ಇದು ದ್ರೋಹಿಯ ಹುನ್ನಾರ
ದೇಶದ್ರೋಹಿಗಳ ಹಿಡಿದು, ಸುತ್ತ ಸದೆಬಡಿದು, ಉತ್ತರಕೆ ನಡೆದು
ಈ ನಾಡ ಮೇಲೆತ್ತಿ… ನಿಲ್ಲೋಣ ಎದೆ ತಟ್ಟಿ || 2 ||
ಶ್ರೀರಾಮನ ಕಾರ್ಯ ದೇಶದೇಕತೆಯ ಧ್ಯೇಯ
ಶ್ರೀರಾಮನ ಕಾರ್ಯ
ಒಂದುಗೂಡಿ ಮತವಿತ್ತರೆಲ್ಲ, ಹಿಂದುತ್ವನಿಷ್ಠ ಶಕ್ತಿ
ಹಿಂದು ಸಂಘಟಕ ಹಿರಿಯ ಆತ್ಮಕೆ ಆಗಬೇಕು ತೃಪ್ತಿ
ಬಲ್ಲವ ಬಲ್ಲ ಇದನ, ಈ ಸಂಘಕಾರ್ಯ ಹದನ
ಸಂಘದಲ್ಲಿ ಮನವಿಟ್ಟು ಚಿಂತೆಗಳ ಬಿಟ್ಟು ಭುಜಕೆ ಭುಜ ಕೊಟ್ಟು
ಈ ನಾಡ ಮೇಲೆತ್ತಿ… ನಿಲ್ಲೋಣ ಎದೆ ತಟ್ಟಿ || 3 ||