ಹೃದಯಂಗಮ ಹಿಂದು ಸಂಗಮ

ಹೃದಯಂಗಮ ಹಿಂದು ಸಂಗಮ
ಬಲು ಸಂಭ್ರಮ ಬಂಧು ಸಮಾಗಮ || ಪ ||

ನಾನಾ ವಿಧದಾಮಿಷಕೊಳಗಾಗಿ
ಧರ್ಮಾಂಧರ ದೌಷ್ಟ್ಯಕೆ ತಲೆಬಾಗಿ
ಮತಬಾಹಿರ ಹತಭಾಗ್ಯರು ನರಳಿರೆ
ಮಾತೆಯ ಮಮತೆಯ ಕರೆಯು ಹೃದಯಂಗಮ || 1 ||

ಮಡಿಲಡಿಯಲಿ ಹುಡಿಯಾಗಿಹ ಜನರು
ಒಲುಮೆಯ ಸ್ಪರ್ಶಕೆ ಹಾತೊರೆದವರು
ಅರಿವಿನ ಅರುಣೋದಯದೊಡಗೂಡಿ
ನಲಿಯುತ ಬರುತಿಹ ನೋಟ ಹೃದಯಂಗಮ || 2 ||

ಬೇಕಿಲ್ಲೆಮಗೆ ಒಣ ವೇದಾಂತ
ಬೇಕಿದೆ ಐಕ್ಯದ ಘನಸಿದ್ಧಾಂತ
ತರುಣ ಜನಾಂಗಕೆ ಸ್ಫೂರ್ತಿಯ ನೀಡುವ
ಅರುಣಪತಾಕೆಯ ಲಾಸ್ಯ ಹೃದಯಂಗಮ || 3 ||

ಜಾತಿವಿಜಾತಿಯ ಭೇದವ ತೊರೆದು
ಸ್ನೇಹದ ಶಾಂತಿಯ ಸೂತ್ರದಿ ಕಲೆತು
ತಲೆಎತ್ತಲಿ ನವ ಭಾರತದೇಶ
ಮೊಳಗಲಿ ಜಯಜಯಘೋಷ ಹೃದಯಂಗಮ || 4 ||

(1982ರ ’ಹಿಂದು ಸಂಗಮ’ ಕರ್ನಾಟಕ ಪ್ರಾಂತ ತರುಣ ಶಿಬಿರದ ಸ್ಫೂರ್ತಿಯಿಂದ ರಚಿಸಿದ್ದು)

Leave a Reply

Your email address will not be published. Required fields are marked *