ಹೃದಯದ ಕಣಕಣ ಮಾರ್ದನಿಗೊಳುತಲಿ
ಗೈದಿದೆ ವಿಜಯದ ಝೇಂಕಾರ
ಭಾರತಮಾತೆಗೆ ಜಯಕಾರ | ಭಾರತಮಾತೆಗೆ ಜಯಕಾರ || ಪ ||
ವಿಶ್ವದ ದೃಷ್ಟಿಯ ಸೃಷ್ಟಿಯಗೈದ
ಉಜ್ವಲ ಸಂಸ್ಕೃತಿ ಹಿಂದುತ್ವ
ವಸುಧೆಯ ಮಕ್ಕಳು ಎಲ್ಲರೂ ಒಂದೇ
ಎನ್ನುತ ಸಾರುತ ಬಂಧುತ್ವ
ಶತಶತಮಾನಕೂ ನಿತ್ಯ ಸನಾತನ
ಭಾರತ ಭೂಮಿಯ ಆದರ್ಶ || 1 ||
ಉರಿದು ವಿನಾಶದ ಹಾದಿಯ ಹಿಡಿದಿದೆ
ವಿಶ್ವವ ಕೆಡಿಸುವ ಪರತತ್ವ
ಉಳಿಸುವುದೊಂದೇ ಮಾನವಕುಲವನು
ಹಿಂದೂ ಧರ್ಮದ ಸಾರಥ್ಯ
ಋಷಿಮುನಿ ಪುಂಗವ ಜೀವನ ದೃಷ್ಟಿಯೇ
ಮನುಕುಲದುಳಿವಿಗೆ ಆಧಾರ || 2 ||
ಕಪಟ ಮತಾಂತರ ಉಗ್ರರ ಆರ್ಭಟ
ದಮನಕೆ ಜೊತೆ ಜೊತೆ ಸೇರೋಣ
ಕವಿದಿಹ ವಿಸ್ಮೃತಿ ಸರಪಳಿ ಬಿಚ್ಚುತ
ಕೆಚ್ಚೆದೆಯಿಂದಲಿ ಸಾಗೋಣ
ಉಕ್ಕಿನ ನರಗಳ, ಬಿಸಿಬಿಸಿ ನೆತ್ತರ
ತರುಣಶಕ್ತಿ ಒಗ್ಗೂಡೋಣ || 3 ||