ಹೊಣೀ ಹೊತ್ನಡೀ ಜರಾ ನೀ ಮುಂದಾs ಮುಂದಾs
ತುಸ ಮುಂದಾ ಮುಂದಾs
ಮಾಡೀ ನಡೀ ನೀನು ಈಗ ಛಂದಾ || ಪ ||
ರಾಷ್ಟ್ರದ ಭವಿತವ್ಯ, ತಿಳ್ಕೋ ನಿ ಹ್ಯಾಂಗ ?
ನುಡಿದಂತೆ ನಡಿಯಾಲು ಕಲಿ ನೀ ಈಗ
ಮಾಡೋಣ್ಣಡೀ, ರತ್ ಆಗೋಣ್ಣಡೀ
ಹಾಡಿ ಕೂಡಿ ಪಾಡಿ ಕಾಪಾಡೋಣ್ಣಡೀ || 1 ||
ಓ ದಾರಿಗನೇ ನಿನಗ್ಯಾತರ್ ಚಿಂತೀ
ಕಲ್ಲ ಗುಡ್ಡಧಾಂsಗ ನೀ ಖಡೀ ನಿಂತೀ
ಬೀಸ್ತದ್ ಗಾಳಿ, ಮ್ಯಾಲೆ ಹೊಡಿತದ್ ಮಳೀ
ಆದ್ರೂssಭಿ ನಿಲ್ಲಪ್ಪ ಖಡೀ ಖಡೀ || 2 ||