ಹೊಂಬಣ್ಣದ ಬೆಳಕಿನಲ್ಲಿ
ಎಳೆ ಬಿಸಿಲಿನ ಕಿರಣದಲ್ಲಿ
ಓಂಕಾರದ ರೂಪದಲ್ಲಿ
ಭಾಗ್ಯೋತ್ಸವ ನಿನಗೆ ಭಾಗ್ಯೋತ್ಸವಾ
ಭಾಗ್ಯೋತ್ಸವಾ ತಾಯೆ ಭಾಗ್ಯೋತ್ಸವಾ || ಪ ||
ಹಿಮಗಿರಿಯ ಮಾಲೆಯಾಗಿ ಸಾಗರವೇ ಸೆರಗಾಗಿ
ಪೈರು ಪಚ್ಚೆ ಹಸುರಾಗಿ ನಿಂತಿರುವೆ ಭವ್ಯವಾಗಿ
ಭಾಗ್ಯೋತ್ಸವ ನಿನಗೆ ಭಾಗ್ಯೋತ್ಸವಾ
ಭಾಗ್ಯೋತ್ಸವಾ ತಾಯೆ ಭಾಗ್ಯೋತ್ಸವಾ || 1 ||
ಕವಿ ಹಾಡಿನ ರಾಗದಲ್ಲಿ ಮರಿದುಂಬಿಯ ಗುಂಗಿನಲ್ಲಿ
ಕೋಗಿಲೆಯ ಕಂಠದಲ್ಲಿ ಕಂದಮ್ಮನ ಅಳುವಿನಲ್ಲಿ
ಭಾಗ್ಯೋತ್ಸವ ನಿನಗೆ ಭಾಗ್ಯೋತ್ಸವಾ
ಭಾಗ್ಯೋತ್ಸವಾ ತಾಯೆ ಭಾಗ್ಯೋತ್ಸವಾ || 2 ||
ಕೇಸರಿಯ ವರ್ಣದಿಂದ ಕಂಗೊಳಿಪ ನೀನೆ ಅಂದ
ಶುಕ ಪಿಕಗಳ ಕೂಗಿನಿಂದ ಗಿಡಮರಗಳ ಚಿಗುರಿನಿಂದ
ಭಾಗ್ಯೋತ್ಸವ ನಿನಗೆ ಭಾಗ್ಯೋತ್ಸವಾ
ಭಾಗ್ಯೋತ್ಸವಾ ತಾಯೆ ಭಾಗ್ಯೋತ್ಸವಾ || 3 ||