ಹಿಂದುತ್ವದ ಜಯಘೋಷವ ಮೊಳಗಿಸಿ

ಹಿಂದುತ್ವದ ಜಯಘೋಷವ ಮೊಳಗಿಸಿ ನಾಡನು ಜಾಗೃತಗೊಳಿಸೋಣ
ಗ್ರಾಮ ನಗರ ಗಿರಿ ಕಾನನದಲ್ಲಿ ಸಾತ್ವಿಕ ಬೆಳಕನು ಬೀರೋಣ
ಪುನರಪಿ ದಿಗ್ದೆಸೆಯಲಿ ಪುರುಷಾರ್ಥದ ಕಲ್ಪನೆ ತೆರೆತೆರೆ ವ್ಯಾಪಿಸಲಿ
ಪಲಾಯನಕಿನಿತೂ ಆಸ್ಪದವಿಲ್ಲ ಪಾರ್ಥಸಾರಥಿಯ ನಾಡಿನಲಿ || ಪ ||

ಭಾಷೆಯು ವೇಷವು ಎಲ್ಲವು ಭಿನ್ನ ಆದರು ಬದುಕು ಏಕರಸ
ಸಾವಿರ ವರ್ಷದ ಸಮರ ವಿಜೇತ ಪಾವನ ಹಿಂದೂ ಜೀವರಸ
ಸಂಘರ್ಷದ ಸಮರಾಂಗಣದಲ್ಲಿ ಮೂಡುತಲಿದೆ ನವ ವಿಶ್ವಾಸ
ಗ್ರಾಮ ಗ್ರಾಮಕೂ ಪ್ರತಿಹೃದಯಕ್ಕೂ ಹಿಂದೂ ರಾಷ್ಟ್ರದ ಸಂದೇಶ || 1 ||

ಜಾತಿಮತಗಳ ಧನಿಕ ಬಡವರ ಭೇದ ಭಾವವು ತೊಲಗುತಿದೆ
ಸ್ನೇಹದ ಪ್ರೇಮದ ಪವಿತ್ರ ಜಾಹ್ನವಿ ಜನಮನದಂಚನು ಸಿಂಚಿಸಿದೆ
ದಶಪ್ರಹರಿಣಿ ದುರ್ಗೆಯ ರೂಪದಿ ತಾಯಿ ಭಾರತಿಯು ಬರತಿಹಳು
ಕ್ಷಾತ್ರ ತೇಜದಿ ತರಿದು ದುರುಳರ ಲೋಕವ ನಿರ್ಭಯ ಮಾಡಿಹಳು || 2 ||

ಮುಕ್ತಿಪಥದೊಳು ಮನುಜನ ನಡೆಸಿದ ದಿವ್ಯಭೂಮಿ ಇದು ಭಾರತವು
ವಿಶ್ವಸ್ತವ ಕಲ್ಯಾಣದ ಪ್ರೇರಣೆ ನೀಡಿದ ನಾಡಿದು ಶುಭಕರವು
ತತ್ಸಮ ಧ್ಯೇಯಕೆ ಅರ್ಪಿತವಾಗಲಿ ವ್ಯಕ್ತಿಯ ಬದುಕಿನ ಕ್ಷಣಕ್ಷಣವು
ಜಾಗರಣದ ಈ ಪವಿತ್ರ ಕಾರ್ಯಕೆ ಧುಮುಕಲಿ ನಾಡಿನ ಪ್ರತಿ ಗೃಹವು || 3 ||

One thought on “ಹಿಂದುತ್ವದ ಜಯಘೋಷವ ಮೊಳಗಿಸಿ

Leave a Reply

Your email address will not be published. Required fields are marked *