ಹಿಂದುಸ್ಥಾನದಿ ಹಿಂದುಗಳೆಲ್ಲರೂ ಒಂದೇ ನಾವು ಎನ್ನಿರೊ

ಹಿಂದುಸ್ಥಾನದಿ ಹಿಂದುಗಳೆಲ್ಲರೂ ಒಂದೇ ನಾವು ಎನ್ನಿರೊ
ಹಿಂದು ಧರ್ಮದ ಪುಣ್ಯ ಪತಾಕೆಯ ವಿಶ್ವದಿ ಹಾರಿಸ ಬನ್ನಿ
ವಂದೇ ಮಾತರಂ ವಂದೇ ಮಾತರಂ || ಪ ||

ಹಿಂದುಸ್ಥಾನದ ಹಿಂದು ಸಂಶಯವಿನ್ನೇತಕೆ ಬಂಧು
ನಮ್ಮ ಪರಂಪರೆ ಹಿಂದು, ನಮ್ಮ ರಕ್ತದ ಕಣಕಣ ಹಿಂದು
ಇತಿಹಾಸವ ಸ್ಮರಿಸೋಣ ವಂದೇ ಮಾತರಂ ನಿಜಮಾರ್ಗವ ಹಿಡಿಯೋಣ
ವಂದೇ ಮಾತರಂ
ಇತಿಹಾಸ ಪರಂಪರೆ ಸಂಸ್ಕೃತಿ ಸ್ಮರಿಸಿ ಭಾರತ ಕಟ್ಟೋಣಾ || 1 ||

ರಾಮಕೃಷ್ಣರಾ ನೀತಿ ಸಿದ್ಧಾಂತದ ಭಾರತ ನೀತಿ
ಶ್ರೀ ಭಗವದ್ಗೀತೆಯ ಸ್ಫೂರ್ತಿ ಆ ವಿಶ್ವವೆ ಬಾಗಿದ ಕೀರ್ತಿ
ಜನಮನದಲಿ ತರಿಸೋಣ ವಂದೇ ಮಾತರಂ, ಹಿರಿ ಭಾರತ ಕಟ್ಟೋಣಾ
ವಂದೇ ಮಾತರಂ
ಭವ್ಯ ಭಾರತದ ಕನಸನು ನಾವು ನನಸಾಗಿರಿಸೋಣ || 2 ||

ಮಂದಿರ ಮಠಗಳು ಹಿಂದು, ಋಷಿ-ಮುನಿಗಳ ತತ್ವವು ಹಿಂದು
ಬೌದ್ಧ-ಜೈನ ಮತ ಹಿಂದು, ಮತಭೇದವ ತೊರೆಯಲಿ ಇಂದು
ಹೊರಹೊಮ್ಮಲಿ ಹಿಂದುತ್ವ ವಂದೇ ಮಾತರಂ , ಬಲವಾಗಲಿ ಬಂಧುತ್ವ
ವಂದೇ ಮಾತರಂ
ಹಿಂದು ಹಿಂದು ಒಂದೇ ತಾರಕ ಮಂತ್ರವ ಪಠಿಸೋಣ || 3 ||

ಪ್ರತಾಪ-ಶಿವಗುರು ಅಂದು ಕಾದಾಡಿದ ಕಡುಗಲಿ ಗಂಡು
ಹಿಂದುತ್ವದ ಬೆಲೆಗಾಗಿ ಹರಿದಾಡಿತು ರಕ್ತದ ಸಿಂಧು
ಪೃಥ್ವಿಯ ಆ ಬಾಣಾ ವಂದೇ ಮಾತರಂ, ಧೃತಿಗೆಡಿಸಿತು ವೈರಿಯನಾ
ವಂದೇ ಮಾತರಂ
ಇತಿಹಾಸದ ಪುಟಪುಟಗಳು ಹಾಡಿವೇ ನಿನ್ನ ವೀರಗಾನಾ || 4 ||

ಹರಿಹರಾ-ಹುಕ್ಕಬುಕ್ಕ ಶ್ರೀ ಬಸವೇಶ್ವರರ ಮತ ಹಿಂದು
ಆ ಹಂಪೆಯಾ ವಿಜಯನಗರ ಶಿಲ್ಪಕಲೆಗಳ ಹೇಳಿಕೆ ಹಿಂದು
ಧಗಧಗಿಸುತ ನಿಂತಿಹವು ವಂದೇ ಮಾತರಂ, ಮುಕ್ಕಾಗಿಹ ಮೂರ್ತಿಗಳು
ವಂದೇ ಮಾತರಂ
ಸೇಡಿಗೆ ಕಾದಿವೆ ಕ್ರಾಂತಿಯ ಕಿಡಿಗಳು ಎಚ್ಚರವಾಗಿರಿನ್ನೂ || 5 ||

ಸ್ವತಂತ್ರ ಸಿಕ್ಕಿತು ಅಂದು, ತುಂಡಾಯಿತು ಭಾರತ ನೊಂದು
ದುಷ್ಟಶಕ್ತಿಗಳು ಇಂದೂ ನಿನ್ನ ನುಂಗಲು ಬಯಸಿದೆ ಹಿಂದು
ಬಿಡು ಮತಗಳ ಕಚ್ಚಾಟ ವಂದೇ ಮಾತರಂ, ದುಡಿ ಒಂದಾಗಲು ರಾಷ್ಟ್ರ
ವಂದೇ ಮಾತರಂ
ಅಸ್ಪೃಶ್ಯತೆ ಅಳಿಸಿ ಭೇದವ ಸರಿಸಿ ಒಂದಾಗಲು ಬಯಸಿ || 6 ||

ಹರಿಜನ ಗಿರಿಜನ ಇರಲಿ ಶ್ರೀ ಹರಿಹರ ಪಠಣಕೆ ಬರಲಿ
ಹಿರಿಜನ ಕಿರಿಜನರೆಂಬ ಆ ಭೇದವು ನಮ್ಮಯ ಬಿಡಲಿ
ಓಂಕಾರವ ಪಠಿಸೋಣ, ವಂದೇ ಮಾತರಂ, ಒಂದಾಗಿಯೇ ನಡೆಯೋಣ
ವಂದೇ ಮಾತರಂ
ಹಿಂದು ಧರ್ಮದ ತತ್ವಪ್ರಣಾಳಿಕೆ ವಿಶ್ವಕೆ ತಿಳಿಸೋಣ || 7 ||

ವಿಶ್ವದ ವಿರಾಟ ಹಿಂದು ಪ್ರಜ್ವಲಿಸಲು ಹತ್ತಿದೆ ಇಂದು
ಸುಸಂಘಟಿತಮಯವಾಗಿ ಪ್ರಳಯಂಕರವಾದೀತು ನೊಂದು
ಎದ್ದೇಳಲಿ ದಳ ಇಂದೇ ವಂದೇ ಮಾತರಂ, ಸದ್ದಡಗಲಿ ವರವಿಂದೆ
ವಂದೇ ಮಾತರಂ
ಹಿಂದುಶಕ್ತಿಯ ಸಂಚಯವಾಗಲಿ ಮಿಂಚಿನ ವೇಗದಲಿ || 8 ||

ವಿಶ್ವಕೇ ಆತ್ಮವು ಹಿಂದು ನಿಜಮಾನವ ಧರ್ಮವು ಹಿಂದು
ಶ್ರೀಕೃಷ್ಣನು ಬೋಧಿಸಿದಂಥಾ ಗೀತಾಮೃತ ವಿಶ್ವಕೇ ಒಂದು
ಅನ್ಯಾಯವ ಅಳಿಸೋಣ ವಂದೇ ಮಾತರಂ, ನಿಜನ್ಯಾಯವ ಗಳಿಸೋಣಾ
ವಂದೇ ಮಾತರಂ
ವಿಶ್ವದ ಹಿಂದುಗಳೆಲ್ಲರೂ ಸಂಘದ ಮಂತ್ರವ ಪಠಿಸೋಣಾ || 9 ||

Leave a Reply

Your email address will not be published. Required fields are marked *