ಹಿಂದುಶಕ್ತಿಯು ಒಂದುಗೂಡಿದೆ

ಹಿಂದುಶಕ್ತಿಯು ಒಂದುಗೂಡಿದೆ,
ಭೇದಭಾವವ ಮರೆಯುತಾ…
ಸಾಮರಸ್ಯದಿ ಮುಂದೆ ನಡೆಯಲು,
ಶಕ್ತವಾಯಿತು ಭಾರತ… || ಪ ||

ದಿಕ್ಕು ದಿಕ್ಕಲಿ ಧೂರ್ತನರ್ತನ
ರಕ್ತವಾಯಿತು ಈ ಧರೆ…
ದಿಟ್ಟ ಉತ್ತರ ನೀಡಿದುದಕೆ
ಮತ್ತೆ ಬೆಳಗಿತು ಬಾನ್‍ಧರೆ… || 1 ||

ಹಿಂದು ಹೃದಯವು ಶೂನ್ಯವಾಗಲು,
ಸೂತಕದ ಮನೆ ರಾಷ್ಟ್ರವು…
ಸಂಘ ಜನಿಸಿತು ಮೌಢ್ಯ ಅಳಿಯಲು,
ಭವ್ಯ ಮಂಗಳ ಪೀಠವು… || 2 ||

ದಿವ್ಯ ಪುರುಷರು ನಡೆದು ತೋರಿದ,
ವೀರವ್ರತದಾ ಸ್ವೀಕೃತಿ…
ನಾನು ನನ್ನದು ಎಲ್ಲ ಮೋಹವು,
ರಾಷ್ಟ್ರ ಯಜ್ಞಕೆ ಆಹುತಿ… || 3 ||

ವರುಷ ಉರುಳಿತು ಕಾರ್ಯ ಬೆಳಗಿತು,
ಕಾರ್ಯಕರ್ತರು ಸಾವಿರ…
ಹಿಂದು ಐಕ್ಯವದೊಂದೆ ಮಂತ್ರವು,
ಯುಗ ಯುಗವು ನಿರಂತರ… || 4 ||

Leave a Reply

Your email address will not be published. Required fields are marked *