ಹಿಂದು ರಾಷ್ಟ್ರಕೆ ಬಂದೆರಗುತಲಿವೆ

ಹಿಂದುರಾಷ್ಟ್ರಕೆ ಬಂದೆರಗುತಲಿವೆ
ತೊಂದರೆಗಳ ಮಹಾಪೂರಾ
ಅಂತಿಹ ಹಿಂದು ನುಡಿಯುವನಿಂದು
ಸಂಘಟನೆಯೇ ಪರಿಹಾರ || ಪ ||

ಅತಿಜಾತೀಯತೆ ಆರ್ಥಿಕ ಅಸಮತೆ
ಸಾಮಾಜಿಕ ವಿಷಮತೆಯ ವ್ಯಥೆ
ಪ್ರಾಂತವನೊಡೆಯುವ ಪಂಥವನೆಸೆಯುವ
ಭಾಷಾ ದ್ವೇಷದ ನಿತ್ಯ ಕಥೆ
ಸ್ವಾರ್ಥವ ಮೆರೆಸುವ ರಾಷ್ಟ್ರವ ಮರೆಸುವ
ಬದುಕಿನ ಕಾಳಗ ಘನಘೋರ || 1 ||

ಅಸಾಮಿನಲಿ ಬುಸುಗುಡತಲಿದೆ
ಅರಾಜಕತೆಯ ವ್ಯವಹಾರ
ಕಾಶ್ಮೀರದ ಆ ಕಣಿವೆಗಳೆಡೆಯಲಿ
ದುಷ್ಟ ವೈರಿಯ ಫೂತ್ಕಾರ
ನಾಡಿನ ಉದ್ದಗಲದಿ ಪಿಡುಗಾಗಿದೆ
ನೀತಿರಹಿತ ಭ್ರಷ್ಟಾಚಾರ || 2 ||

ಐಕ್ಯತೆಯುಳಿಸಲು ಕೇಶವ ಕಲಿಸಿದ
ಹಿಂದೂ ಸಂಘಟನೆಯ ಮೋಡಿ
ವ್ಯಕ್ತಿಯ ಬೆಳೆಸುವ ಶಕ್ತಿಯ ಗಳಿಸುವ
ಶಾಖೆಯು ಸಂಘಟನೆಯ ನಾಡಿ
ಇತಿಹಾಸದ ಹೊಸ ಚೇತನ ಪಡೆದಿದೆ
ಹಿಂದುತ್ವದ ಘನಹೂಂಕಾರ || 3 ||

Leave a Reply

Your email address will not be published. Required fields are marked *