ಹಿಂದು ಓ ಹಿಂದು ಹಿಂದು ಓ ಹಿಂದು
ಹಿಂದುಸ್ಥಾನದಿ ವಾಸಿಪರೆಲ್ಲ
ಬನ್ನಿರಿ ಡಂಗುರ ಹೊಡೆಯುವ ಇಂದು
ಹಿಂದುಗಳೆಲ್ಲ ಎಂದಿಗೂ ಒಂದೆಂದು || ಪ ||
ಏಳು ಬಣ್ಣಗಳು ಒಂದಾಗುವಂತೆ ಸಪ್ತಸ್ವರಗಳಾ ಸಂಗೀತದಂತೆ
ದೇವನೊಬ್ಬ ಹಲನಾಮಗಳಂತೆ ವಿವಿಧತೆಯಲ್ಲಿ ಏಕತೆಯಂತೆ || 1 ||
ಜಾತಿ ಬಂದಿದೆ ಹುಟ್ಟಿನ ಜೊತೆಗೆ ಎಂದಿಗೂ ಬೇಡ ಭೇದ ಭಾವನೆ
ನೆಲಜಲ ಗಾಳಿ ಬೆಳಕುಗಳೆಮಗೆ ಸಮಾನ ಮಾನ್ಯತೆ ನೀಡುವ ಹಾಗೆ || 2 ||
ಶಂಖ ಜಾಗಟೆ ನಗಾರಿ ಮದ್ದಳೆ ಧರ್ಮದುಂದುಭಿ ಮೊಳಗಲಿ ಎಲ್ಲೆಡೆ
ನಾವೆಲ್ಲ ಬದ್ಧರು ಧರ್ಮರಕ್ಷೆಗೆ ರಕ್ಷಿಪರನ್ನು ರಕ್ಷಿಪ ಧರ್ಮವು || 3 ||