ಹಿಂದೂ ನಾವು ಭೀತಿಯದಾರದು ಜಗದೀ ನಮಗಿಂದು
ಭಗವಾಧ್ವಜವೇ ಪ್ರಾಣ ನಮ್ಮದು ಜೀವನ ಪುಷ್ಪದೊಳರ್ಚಿಪೆವಿಂದು || ಪ ||
ಹುಕ್ಕ ಬುಕ್ಕರು ವೀರ ಶಿವಾಜಿ ಪ್ರತಾಪ ಪುಲಿಕೇಶಿ, ಹೋ ಪ್ರತಾಪ ಪುಲಿಕೇಶೀ
ಪ್ರಾಣಗಳರ್ಪಿಸಿ ಹಿಂದೂ ಧರ್ಮದ ಕೀರ್ತಿಯ ಜಗದೊಳು ಬೀರಿದರಂದು || 1 ||
ತಳೆದೆವು ಜನ್ಮವ ಭಾಗ್ಯವಿದೆಮ್ಮಯ ಹಿಂದೂಸ್ಥಾನದಲಿ, ಹೋ….
ಹಿಂದೂ ಹಿಂದೂ ಘೋಷವ ಗೈಯುತ ಜಗವನು ಪಾವನ ಮಾಡುವೆವಿಂದು || 2 ||
ಹಿಂದೂ ಬಂಧುಗಳೆಲ್ಲರು ಕಲೆಯುತ ಶಕ್ತಿಯ ಗಳಿಸುತಲಿ, ಹೋ…..
ಹಿಂದುತ್ವದ ಶ್ರೀ ವಿಜಯ ಪತಾಕೆಯನೇರಿಸಿ ಹಾರಿಸಿ ಬಾಳುವೆವಿಂದು || 3 ||
ಸಾವು ನೋವಿನ ಪರಿವೆಯದಾರಿಗೆ ವೀರರೇ ಎದ್ದೇಳಿ, ಹೋ…..
ಕೆಚ್ಚೆದೆಯಲಿ ಮುನ್ನುಗ್ಗುತ ಭರದಲಿ ವಿಜಯಶ್ರೀಯನು ಸೆಳೆಯುವೆವಿಂದು || 4 ||
ಉಜ್ವಲ ದೇಶದ ಪರಂಪರೆಯ ನಾವ್ ಬೆಳಗಿಸಿ ಹೃದಯದೊಳು, ಹೋ….
ಮಾತೆಯ ಮಂಗಳ ಹಣೆಯೊಳಗಿಡುವಾ ಚಿರ ಸೌಭಾಗ್ಯದ ತಿಲಕವನಿಂದು || 5 ||
ಸಂಘಟನೆಯ ವರ ಜೀವನ ಧರಿಸುವ ಸ್ವಧರ್ಮ ಹಿತಕಾಗಿ, ಹೋ….
ಕೇಶವ ಕೇಶವ ನಾಮವ ಘೋಷಿಸಿ ವೈಭವ ಶಿಖರವನೇರುವೆವಿಂದು || 6 ||