ಹಿಂದು ಹೆಸರಿನ ರಾಷ್ಟ್ರದೇಹದ ಉಸಿರೆ

ಹಿಂದು ಹೆಸರಿನ ರಾಷ್ಟ್ರದೇಹದ ಉಸಿರೆ ನಮನ ಸನಾತನ
ಓ ಮಹೋನ್ನತ ಚೇತನ                                  || ಪ ||

ಹಿಂದುಸಾಗರ ಹಿಮದ ಆಗರ ನದಿಯ ನಾಗರ ಸಂಗಮ
ಮರದ ಮರ್ಮರದಿಂದ ಹೊರಡಿಸು ಸ್ವಾಭಿಮಾನದ ಸರಿಗಮ
ಹಿಂದು ಹಿಂದುವಿನೆದೆಯ ಸ್ಪಂದನ ನಿನ್ನ ಯಾನದ ಇಂಧನ      || 1 ||

ಭಣಗುಡುವ ಜನಮನದ ಗಗನದಿ ತುಂಬಿ ಮೇಘದ ಗರ್ಜನ
ಸ್ವಾರ್ಥ ಜಡತೆಯ ರೂಢಿರಾಡಿಯ ಮಾಡುತಲಿ ಪರಿಮಾರ್ಜನ
ಸಿಡಿಲು ದಹಿಸಲಿ ಮಳೆಯು ತೊಳೆಯಲಿ ಬೆಳಕು ಹೊಮ್ಮಲಿ ಬಾಳಿನ || 2 ||

ಶಕ್ತವಾಗಲಿ ವ್ಯಕ್ತಿಜೀವನ ನಿನ್ನ ಕಾಯದ ಕಣಕಣ
ಪ್ರಾಣವರ್ಧನ ತ್ರಾಣವರ್ಧನ ಬೆಳೆಸು ದ್ರುಮದೊಲು ತೃಣತೃಣ
ವೈರಿಕುಲ ಕಾಳಿಂಗ ಮರ್ದನ ಶೌರ್ಯಧನ ಸಂವರ್ಧನ            || 3 ||

Leave a Reply

Your email address will not be published. Required fields are marked *