ಹಿಂದು ಭೂಮಿಯ ಸಿಂಧೂ ಜಲಧಿಯ ಕಣಕಣಗಳ ಚೈತನ್ಯವ ಹೀರಿ
ಹಿಂದುವಿನೆದೆ ಎದೆ ಸ್ಪಂದನಗೊಳುತಿದೆ ಬಾಂಧವ್ಯದ ಮಜಲೇರಿ || ಪ ||
ಸರಿಸುತ ಕಾರ್ಗತ್ತಲ ದೂರ ಪಸರಿಸುತಾ ಜಾಗೃತಿ ಕದಿರ
ಹಿಂದೂರವಿಯುದಯಿಸಿದನು ನೋಡ, ಹಿಂದಕೆ ಸರಿಯಿತು ಮೋಡ
ಅಂಗಳದಲಿ ಮುಂಜಾವಿಗೆ ಸ್ವಾಗತ, ಭವಿಷ್ಯತ್ತಿಗೆ ಯಶಕೋರಿ || 1 ||
ಕುಗ್ಗಿದೆ ಸಂಕೋಚದ ಅವಧಿ ಹಿಗ್ಗಿದೆ ಸಂತೋಷದ ಉದಧಿ
ಭಾರತಮಾತೆಗೆ ವೈಭವಕಾಲ ಬರುತಿದೆ ಸಂಶಯವಿಲ್ಲ
ಗತಗೌರವವಾ ಮತ್ತೆ ಪಡೆಯುವಾ, ದೃಢನಿರ್ಧಾರವ ತೋರಿ || 2 ||
ಸೋಲಿನ ಕಾರಣಗಳ ಹುಡುಕಿ, ವಿಜಯ ರಣಾಂಗಣದೊಳು ಧುಮುಕಿ
ಸಂಗಮಿಸಿದೆ ಚೇತನ ಕಾವೇರಿ ಸಂಘಟನೆಯ ನಿಜದಾರಿ
ಒಂದನು ಎರಡಾಗಿಸಿ ನಾಲ್ಕಾಗಿಸಿ ನೂರು ಸಾವಿರವ ಸೇರಿ || 3 ||
ವಿಶ್ವವೆ ವಿಶ್ವಾಸವನಿಡುವಾ, ಪ್ರತಿಮಾನವ ಸಂತಸ ಪಡುವಾ
ವಿವಿಧತೆ ಏಕತೆ ಮೇಳೈಸಿಹುದು ದ್ವೈತಾದ್ವೈತವು ನಮದು
ಧರ್ಮದ ತಳಹದಿ ಕರ್ಮಕೆ ನಾಂದಿ, ಎಂಬೀ ತತ್ವವ ಸಾರಿ || 4 ||