ಹಿಮಗಿರಿಯಿಂದಿಳಿಯುತಲಿದೆ

ಹಿಮಗಿರಿಯಿಂದಿಳಿಯುತಲಿದೆ
ಪಶುಚೀನದ ವಿಷಧಾರೆ
ಹಿಂಗಿಸೆ ಶಂಕರರಾಗುತ
ಏಳಿರಿ ಭಾರತ ಸುತರೆ || ಪ ||

ಕಳೆದಿದೆ – ಒಣ ಹೆಮ್ಮೆಯ ತಳೆಯುತ
ಮೂಲೆಯಲೊರಗುತ ಕನವರಿಸುವ ಕಾಲ
ಕಳೆದಿದೆ
ಸರಕಾರದಿ ವಿಶ್ವಾಸವನಿರಿಸುವ ಕಾಲ ! || 1 ||

ಇತಿಹಾಸದ ಪುಟಪುಟದಲಿ ಪುಟಿಯುವ
ರಕ್ತಾಕ್ಷರಗಳ ಕೆಳಗೆ
ಹೊಸ ಹಸ್ತಾಕ್ಷರಗಳ ಅಂಕಿತಗೊಳಿಸಲು
ಸ್ಥಳ ಕಾದಿದೆ ನಿಮಗೆ ! || 2 ||

Leave a Reply

Your email address will not be published. Required fields are marked *