ಹೆಮ್ಮೆಯ ನಮ್ಮ ಇದು ದೇಶವು ಹಿಂದು ದೇಶವು
ಒಂದಾಗಿ ಕೂಡಿದಲ್ಲಿ ಬೆಳೆವೆವು ನಾವು ಬೆಳೆವೆವು || ಪ ||
ಜಾತಿ ಮತ ಪಂಥ ಭೇದ ಚಿತ್ರವು
ಜೀವರಸ ಒಂದೇ ವಿಚಿತ್ರವು
ಅರಿವಲ್ಲಿ ಅರಿತಲ್ಲಿ ಆನಂದವು ಎಮಗೆ ಆನಂದವು || 1 ||
ಕೇಶವನ ಸಂಘಟನೆ ಮಂತ್ರವು
ಮಾಧವನ ನಂಟುತನ ತಂತ್ರವು
ತರುವಲ್ಲಿ ತಂದಲ್ಲಿ ಆನಂದವು ಎಮಗೆ ಆನಂದವು || 2 ||
ರಾಷ್ಟ್ರೀಯ ಐಕ್ಯಜರ ಮಿತ್ರವು
ರಾಷ್ಟ್ರವಿರೋಧಿಗಳ ಶತ್ರುವು
ತಿಳಿವಲ್ಲಿ ತಿಳಿದಲ್ಲಿ ಆನಂದವು ಎಮಗೆ ಆನಂದವು || 3 ||