ಹೇ ತಾಯೇ ಹೊರಟಿಹೆನು ಈ ನಾಡ ಗಡಿಗೆ
ಜಯ ಮಾಲೆಯ ನಾ ತರುವೆ ನಿನ್ನಾ ಮುಡಿಗೆ
ನಿನ್ನಾ ಹಾಡುವವರಿಗೆ ನಾ ನಮಿಸುತಿಹೆನು
ಯಶಗೊಳಲಿ ನಾ ಎಂದು ಹರಸು ನೀನು || ಪ ||
ಈ ನಾಡ ಗಡಿಯಲ್ಲಿ ಆ ದುಷ್ಟ ಸಂಚು
ಅವಗೆ ನಾ ಮಾಡುವೆನು ಸರಿಯಾದ ಹೊಂಚು
ವೀರ ರಕ್ತವ ಪಡೆದ ಮಾತೆಯುsss ನೀನು
ನಿನ್ನೆದೆಯ ಹಾಲಿನಲಿ ಬೆಳೆದೆss ನಾನು || 1 ||
ಹಿಂದೊಮ್ಮೆ ಬಂದಿತ್ತು ಸ್ವಾತಂತ್ರ್ಯ ಕರೆಯು
ಹಿರಿಮೆಯಲಿ ಬೆಳೆದಿತ್ತು ಈ ನಾಡ ಧರೆಯು
ಕನ್ಯಾಕುಮಾರಿss ಕಾಶ್ಮೀರದವರೆಗೆ
ಕಾದಿದೆ ಯುವಶಕ್ತಿ ನಿನ್ನಾ ಕರೆಗೆ || 2 ||