ಗೊತ್ತಿಲ್ಲ ಗುರಿಯಿಲ್ಲ ಎತ್ತೆಂದರತ್ತತ್ತ
ಅವರಿವರ ಕಾಲ್ಚೆಂಡಿನಂತಾಗಿ ಒದ್ದೆಡೆಗೆ ಓಟ
ಎದ್ದವರ ಕೆಳಗೆಳೆದು ನಾವೆ ನಮ್ಮನು ತುಳಿದು
ಸೂರ್ಯ ಸಾಯುವ ಕಡೆಗೆ ದಾರಿಯರಸುವ ವಿಕಟ ನೋಟ || ಪ ||
ನೋಡಿದೆವು ಓಡಿದೆವು ಹೀಗೆ ಪರದಾಡಿದೆವು
ನಾಲ್ಕಾರು ಶತಮಾನ ಮಾರುಕಟ್ಟೆಗೆ ಬಂತು ಮಾನ
ಆಗೊಂದು ವಿಜಯದಶಮಿಯ ದಿನದಿ, ಹುದುಗಿದ್ದ
ಹೃದಯದಾಸೆಯ ಹೊರಗೆಳೆದೆ ಹೊರಡಿಸಿದೆ ಬಯಲಗಾನ || 1 ||
ಸೈತಾನನನುಚರರ ಸ್ವೈರ ತುಳಿತಕೆ ಸಿಕ್ಕಿ
ನೂರ್ಕಾಲ ನಂಜೇರಿ ನವೆದು ನಲುಗಿದ ನಾಡಿನೆದುರು
ಹಾಲುಬಟ್ಟಲನಿಟ್ಟೆ ಹೆಸರ ಹಿಗ್ಗನು ಕೊಟ್ಟೆ
ನೂರೆಂಟು ಕಟ್ಟುಗಳ ಕಿತ್ತೆಸೆದು ಬೆನ್ತಟ್ಟಿ ಬಿಟ್ಟೆ || 2 ||
ಎತ್ತಿದೆವು ತಲೆಯೆತ್ತಿದೆವು ಎತ್ತರೆತ್ತರಕೆ
ಚಿತ್ತಭಿತ್ತಿಯ ಮೇಲೆ ಚಿತ್ರಚರಿತೆಯ ಕೆತ್ತಿದಾಗ
ಹತ್ತಿದೆವು ಮತ್ತೊಮ್ಮೆ ರಾಷ್ಟ್ರತನದುನ್ನತಿಗೆ
ಹಿಂದುತ್ವದಗ್ನಿಶಿಖೆ ಹೃದಯಸಮಿಧೆಗೆ ಹೊತ್ತಿದಾಗ || 3 ||
ಇಂದು ನೆನ್ನೆಯದಲ್ಲ ನಾಳೆ ಮುಗಿಯುವುದಲ್ಲ
ಇದು ಗೊತ್ತು ಈ ದಾರಿ ಈ ಕಾರ್ಯ ಈ ದಿವ್ಯ ಧ್ಯೇಯ
ಕ್ಷುದ್ರವಾದುದ ಮರೆತು ಸಿದ್ಧಿಗೊಯ್ಯುವ ಕುರಿತು
ಭಯವಿಲ್ಲ ಭದ್ರವಿದೆ ಬಿದ್ದಿರುವ ನಿನ್ನಡಿಯ ಪಾಯ ! || 4 ||