ಎನಿತೆನಿತೋ ಪುಣ್ಯದಾ ಭಾಗ್ಯದಾ ಫಲವಾಗಿ
ಭಾರತಿಯ ಬಸಿರಿನಾ ಶಿಶುವಾದೆನಾ
ದೇವ ದುರ್ಲಭ ನಾಡು ಸಂಸ್ಕೃತಿಯ ನೆಲೆವೀಡು
ಭರತ ದೇಶದ ಪುಣ್ಯ ಕಣವಾದೆ ನಾ || ಪ ||
ಇಲ್ಲಿ ಹರಿಯುವ ನೀರ ಕಣಕಣವೂ ಪಾವನವು
ತಾಯಿ ಗಂಗೆಯ ಪುಣ್ಯ ತೀರ್ಥದಂತೆ
ಇಲ್ಲಿರುವ ಗಿಡಬಳ್ಳಿ ವೃಕ್ಷಜನ್ಯಗಳೆಲ್ಲ
ಒಂದೊಂದು ಔಷಧೀಯ ಲೋಕದಂತೆ || 1 ||
ಮಣ್ಣ ಒಳಗಿದೆ ಖನಿಜ, ಮೇಲೆ ಧಾನ್ಯದಾ ಕಣಜ
ಭೂಮಾತೆ ಗೋಮಾತೆ ಸಾಕ್ಷಿಯಂತೆ
ವಲಯ ಮಾರುತಗಾನ ಪುಣ್ಯ ಕ್ಷೇತ್ರದ ತಾಣ
ಭಾರತವು ಸಕಲಗುಣ ನಾಕದಂತೆ || 2 ||
ಏನ ಬೇಡಲಿ ಇನ್ನು ನೀನಿತ್ತೆ ಸಕಲವನು
ಋಣವ ತೀರಿಸಲೆನಗೆ ಈ ಜನ್ಮ ಸಾಕೇ……. ?
ರಾಷ್ಟ್ರಸೇವೆಯ ಗೈವ ಪಣವ ತೊಡದಿರೆ ನಾನು
ಸಾರ್ಥಕತೆ ದೊರಕುವುದೇ ಬಾಳ ಪಯಣಕ್ಕೆ || 3 ||