ಎಚ್ಚರಗೊಳ್ಳಿ ಯುವಜನರೆ, ನಾsಡರಕ್ಷಣೆ

ಎಚ್ಚರಗೊಳ್ಳಿ ಯುವಜನರೆ, ನಾsಡರಕ್ಷಣೆ ನಮ್ಮ ಹೊಣೆ |
ಜಡತೆಯ ತೊರೆದು ಭ್ರಮೆಯನು ಹರಿದು
ಬದಲಿಸಬನ್ನಿ ವಿಶ್ವವನೇ ಕದಲಿಸ ಬನ್ನಿ ಪೃಥ್ವಿಯನೇ || ಪ ||

ಜಗವನೆ ಜಯಿಸಿದ ಸಂಸ್ಕೃತಿ ಎಮ್ಮದು ಎಂಬುದನೆಂದಿಗು ಮರೆಯದಿರಿ
ಪಶ್ಚಿಮದಿಕ್ಕಿನ ಭೋಗಜಗತ್ತಿನ ಥಳುಕಿಗೆ ನೀವ್ ಬಲಿಯಾಗದಿರಿ
ಅಂಧಾನುಕರಣೆಯ ಮಾಡದಿರಿ
ನಾsಡರಕ್ಷಣೆ ನಮ್ಮ ಹೊಣೆ, ಬದಲಿಸಬನ್ನಿ ವಿಶ್ವವನೇ || 1 ||

ಐಕ್ಯವ ಮರೆತು ಸ್ವಾರ್ಥದಿ ಮೆರೆದು ನಾಡಿದು ದಾಸ್ಯಕೆ ಒಳಗಾಯ್ತು
ಅರಿಗಳ ಕುಹಕದ ಸಂಚಿಗೆ ಸಿಲುಕಿ ತಾಯ್ನೆಲವೆಮ್ಮದು ಹೋಳಾಯ್ತು
ಭಾರತಮಾತೆಗೆ ಗೋಳಾಯ್ತು
ನಾಡರಕ್ಷಣೆ …. || 2 ||

ಕೆನ್ನಾಲಗೆಯನು ಚಾಚಿದೆ ಚೀನಾ ಗಡಿರಾಜ್ಯಂಗಳ ಕಬಳಿಸಲು
ಪಾತಕಿ ಪಾಕಿ ಬಾಂಗ್ಲಾ ಖೂಳರು ಹಾಲಾಹಲವನು ಹರಡಿಹರು
ವಿದ್ರೋಹದ ಸೆಲೆ ಹರಿಸಿಹರು
ನಾಡರಕ್ಷಣೆ …. || 3 ||

ಈಸಾಯಿ ಇಸ್ಲಾಮಿನ ಅಡಿಯಲಿ ನಡೆದಿದೆ ಘೋರ ಮತಾಂತರವು
ಸತ್ತಾರೂಢರ ಮಿಥ್ಯಾನೀತಿಯು ನಾಡಿಗೆ ಕಡು ಗಂಡಾಂತರವು
ಕಾದಿಹುದೇ ರಾಷ್ಟ್ರಾಂತರವು ?
ನಾಡರಕ್ಷಣೆ … || 4 ||

ಕುಗ್ಗಿದ ಭೂಪಟ ಹಿಗ್ಗಿಸಬನ್ನಿ ಹಿಮಗಿರಿಯುತ್ತರ ಉತ್ತರಕೆ
ತಗ್ಗಿದ ಬಾವುಟವೇರಿಸಬನ್ನಿ ಬಂಧುಗಳೇ ಬಾನೆತ್ತರಕೆ
ತಾರಾಲೋಕದ ಹತ್ತಿರಕೆ
ನಾಡರಕ್ಷಣೆ … || 5 ||

Leave a Reply

Your email address will not be published. Required fields are marked *