ಧೀರ ಪಥವನೆ ಹಿಡಿದು ವಿಜಯ ನಿಶ್ಚಿತವೆಂದು
ಅಸುರ ಸಂತಾನವನು ಅಳಿಸಲೆಂದು
ಹೊರಟೆವು ರಣಾಂಗಣಕೆ ಕಾದಲೆಂದು
ಕೀರ್ತಿಕಳಶವ ತಾಯ್ಗೆ ತೊಡಿಸಲೆಂದು || ಪ ||
ರಣಭೇರಿ ಗರ್ಜನೆಯು ಸಿಡಿಲ ಕರತಾಡನವು
ಸಾಹಸದ ಪಡೆ ನಮದು ಅಮರವಂಶ
ಮೃತ್ಯುಂಜಯರು ನಾವು ಈಶ್ವರಾಂಶ || 1 ||
ವೀರವ್ರತಿಗಳು ನಾವು ಸಾವಿರದ ಸಂತತಿಯು
ಭರತಮಾತೆಯ ಅಭಯ ಖಡ್ಗಹಸ್ತ
ಸಮರ ಭೂಮಿಯು ನಮಗೆ ತೀರ್ಥಕ್ಷೇತ್ರ || 2 ||
ಭರತಕುಲದಭಿಮಾನ ತರುಣಗಣದುತ್ಥಾನ
ಮನುಕುಲಕೆ ಹಿಂದುತ್ವದಭಯದಾನ
ಮೊಳಗಲಿದೆ ಭಾರತಿಯ ವಿಜಯಗಾನ || 3 ||
ಖುಶಿಯಾಗಿದೆ