ಧವಳ ಹಿಮದ ಗಿರಿಯ ಮೇಲೆ ಅರುಣ ಧ್ವಜವ ಹಾರಿಸಿ
ಮುಗಿಲ ಏಣಿ ಏರಿ ನಿಂದು ವಿಜಯಭೇರಿ ಬಾರಿಸಿ || ಪ ||
ಸಿಂಧು ಕಣಿವೆಯೊಡಲಿನಿಂದ ವೀರಗಾನ ಮೊಳಗಲಿ
ಧ್ಯೇಯರವಿಯ ಕಿರಣ ತರುಣರೆದೆಯ ಗುಡಿಯ ಬೆಳಗಲಿ
ಎದ್ದು ನಿಲ್ಲು ಭಾರತ… ದಿವ್ಯಪ್ರಭೆಯ ಬೀರುತ || 1 ||
ಮನವ ಹಸಿರುಗೊಳಿಸುತಿಹಳು ಭಾವಗಂಗೆ ಅನುದಿನ
ಇಳೆಯ ಕೊಳೆಯ ತೊಳೆಯುತಿಹಳು ತಾಯಿ ತುಂಗೆ ಕ್ಷಣಕ್ಷಣ
ನೆಲವಿದೆಮ್ಮ ಪಾವನ… ಎನಿತು ಧನ್ಯ ಜೀವನ || 2 ||
ನಾಡಗುಡಿಯ ಮೂರು ಕಡೆಯು ಪೊರೆವ ಶಾಂತ ಸಾಗರ
ಹಿಂದು ಜನರ ಹೃದಯವಿಂದು ಕ್ಷಾತ್ರತೇಜದಾಗರ
ಸ್ಫೂರ್ತಿ ಗೌರಿಶಂಕರ… ಕಾಲಯಮನು ಕಿಂಕರ || 3 ||
ಅಸುರತನದ ಉಸಿರ ನೀಗಿ ಭೇದಭಾವ ನೀಗುತ
ಸಾಗು ಮುಂದೆ ಮುಂದೆ ಸಾಗು ಮಾತೆಯನ್ನು ಸ್ಮರಿಸುತ
ನಿನಗೆ ಜಯದ ಆರತಿ… ಹರಸು ತಾಯೆ ಭಾರತಿ || 4 ||
Ji Audio link is not present for https://ganamala.net/dhavala-himada-giriya-mele/