ಧರ್ಮಾಧರ್ಮದ ಕರುರಣರಂಗದಿ
ಕೇಶವ ತೋರು ವಿವೇಕ
ಹೇ ಯುಗಸಾರಥಿ ಗೊಂದಲ ತೊಲಗಿಸು
ಮನದೊಳು ಕವಿದಿದೆ ಅವಿವೇಕ || ಪ ||
ಸತ್ಪಾತ್ರರ ವಿನಯದಿ ಕರೆದಿತ್ತರೆ
ದಾನವಿದೆನ್ನನುವ ಘನಕೀರ್ತಿ
ಪಾತ್ರತೆ ಹೀನಗೆ ದಾನವನಿತ್ತರೆ
ವ್ಯರ್ಥ-ಅಧರ್ಮ ಅನರ್ಥಗತಿ
ನೀರಸ ತೃಣಕಣ ಕಸವನೆ ತಿಂದರು
ಕ್ಷೀರಾಮೃತ ಈವುದು ಗೋವು
ಕ್ಷೀರವ ಕುಡಿಕುಡಿದೂ ವಿಷಜ್ವಲೆಯ
ಕಕ್ಕುವುದೈ ನಾಗರಹಾವು
ಸಾರ್ಥಕದಾನದ ಸಾಧ್ಯತೆಯೊಂದೇ
ಪಾತ್ರಾಪಾತ್ರ ವಿವೇಕ | ಹೇ ಯುಗ ಸಾರಥಿ || 1 ||
ಘೋರ ಕಪಟಿ ಆ ಘೋರಿಯ ಮೋಡಿಗೆ
ಪೃಥ್ವಿರಾಜ ಕೈಸೆರೆಯಾದ
ಶಕುನಿಯ ಜಾಲಕೆ ಸಿಲುಕುತ ಸೋಲುತ
ಧರ್ಮರಾಜ ರಾಜ್ಯವ ಕಳೆದ
ಭಸ್ಮಾಸುರನಿಗೆ ವರಗಳನೀಯುತ
ಶಂಕರನೂ ವಂಚಿತ – ಅಕಟಾ
ಪುಣ್ಯ ಗೋಕುಲದಿ ಕುಟಿಲೆ ಪೂತನಿಗೆ
ಕ್ಷೀರಾಮೃತ ವಿಷವಾಯ್ತು ದಿಟ
ಗುಣವೇ ದುರ್ಗುಣವೆನಿಸಲು ಕಾರಣ
ಗುಣಗಣದಾ ಅತಿರೇಕ | ಹೇ ಯುಗಸಾರಥಿ..|| 2 ||
ಸಮತೆಯೆ ಸರ್ವರ ಹೃದಯದಿ ಬೆಳಗಿದೆ
ಸರ್ವಪಂಥ ಸಮಭಾವರಸ
ತಾ ನಡೆದುದೆ ಸರಿ, ಮಿಕ್ಕೆಲ್ಲವು ಬರಿ –
ಯೆನುವಾ ಗರ್ವ ತರದೆ ವಿರಸ
ಸರ್ವಸಹಿಷ್ಣುತೆ ಅನ್ಯಮತಾಂಧತೆ
ಕಥೆಗಳ ಸಾರಿದೆ ಇತಿಹಾಸ
ಆರ್ಯಭೂಮಿಯಿದು ಆಶ್ರಯ ನೀಡಿದೆ
ಶರಣಾಗತಲೋಕಕೆ ಸತತ
ಹಿಂದುತ್ವವು ತೋರಿದೆ ವೈಶ್ವಿಕಪಥ
ಸತ್ಯವದೊಂದೇ ಪಂಥ ಅನೇಕ
ಸ್ವರ್ಗವದೊಂದೇ ಮಾರ್ಗ ಅನೇಕ
ಧಾಮವದೊಂದೇ ನಾಮ ಅನೇಕ | ಹೇ ಯುಗ ಸಾರಥಿ || 3 ||
ಕುರುವಂಶದ ಆಗಬೇಕು
ಕುರುರಣರಂಗದಿ