ದಶದಿಶೆಗಳಿಗೂ ವ್ಯಾಪಿಸುತಿಹುದು ಹಿಂದೂ ಸೂರ್ಯನ ಹೊಂಗಿರಣ
ಹೊಸ ದಾಖಲೆಯನು ಸ್ಥಾಪಿಸಲಿಹುದು ಹಿಂದೂ ವೀರರ ಸಂಚಲನ
ಹೊಸದಿಗಂತದೆಡೆಗೀ ಪಯಣ || ಪ ||
ನಮ್ಮ ಪುರಾತನ ತತ್ವಬುನಾದಿಯು ಮನುಜತ್ವದ ಮೂಲಾಧಾರ
ಮೃತ್ಯುಂಜಯವೀ ಪಾವನ ಸಂಸ್ಕೃತಿ ಚಿರಚೈತನ್ಯದ ಭಂಡಾರ
ಹಿಂದೂ ವೀರರ ಸಂಚಲನ … ಹೊಸದಿಗಂತದೆಡೆಗೀ ಪಯಣ || 1 ||
ಭಾರತಮಾತೆಯ ಗೌರವಘನತೆಯ ಭಾವೈಕ್ಯದ ಸಂರಕ್ಷಣೆಗೆ
ಪೂರ್ಣ ಸಮರ್ಪಿತವೆಮ್ಮಯ ಜೀವನ ನಾಡಿನ ಬಲ ಸಂವರ್ಧನೆಗೆ
ಹಿಂದೂ ವೀರರ ಸಂಚಲನ … ಹೊಸದಿಗಂತದೆಡೆಗೀ ಪಯಣ || 2 ||
ಹಿಮಗಿರಿ ಸಾಗರ ವನಸಿರಿ ಸುಂದರ ನಮ್ಮದೆ ಎಂದಿಗೂ ಕಾಶ್ಮೀರ
ಸೋಲನು ಒಲ್ಲೆವು ಸೋಲಿಸಬಲ್ಲೆವು ಅರಿಗಳ ಸಾಸಿರ ಷಡ್ಯಂತ್ರ
ಹಿಂದೂ ವೀರರ ಸಂಚಲನ … ಹೊಸದಿಗಂತದೆಡಗೀ ಪಯಣ || 3 ||
ನಾಡನೆ ನುಂಗುವ ಹೊಂಚನು ಹಾಕಿಹ ಬಹುರಾಷ್ಟ್ರೀಯರ ವಂಚನೆಯ
ಸಂಚನು ಮುರಿದು ಸಾಧಿಸಲಿಹೆವು ಸ್ವಾವಲಂಬನೆಯ ಸಾಧನೆಯ
ಹಿಂದೂ ವೀರರ ಸಂಚಲನ … ಹೊಸದಿಗಂತದೆಡೆಗೀ ಪಯಣ || 4 ||