ಭಾರತದಾ ನವ ತರುಣರಂಗದಿ ಸತ್ಯ ಅಸತ್ಯದ ಸಮರ
ಬೆಳೆದು ಹಿಂದು ಬಲ ಅಳಿದು ವಾಮಛಲ ಕರಗಲಿದೆ ಭ್ರಮೆ ತಿಮಿರ
ಕೇಶವನಿರುವೆಡೆ ಧರ್ಮ ಧರ್ಮಕೆ ಜಯ ಯುಗ ನಿಯಮ || ಪ ||
ಶತಶತಮಾನದ ಮೌಢ್ಯದ ಗೋಡೆ ಒಡೆಯಲಿ ಅಳಿಸುತ ನೋವ
ಕನಕ ಭಕ್ತಿಗೆ ಸಂಘ ಶಕ್ತಿಗೆ ಒಲಿಯುವ ಸಮಾಜ ದೇವಾ
ಧ್ವನಿಸಲಿ ಹಿಂದೂ ಭಾವ
ಪುನರುತ್ಥಾನ ಪುನರುಜ್ಜೀವನ ಗರ್ಭಗುಡಿಯ ಮಡಿಲಿಂದ
ನವ ನಿರ್ಮಾಣದ ಪ್ರತಿ ಶಿಲೆಕಲ್ಲಿಗೂ ಸಮರಸ ಸೂತ್ರದ ಬಂಧ
ಭೇದ ಬೆದರುವ ಸ್ವಾರ್ಥ ಕುತಂತ್ರ ಬಯಲಾಗುತ ನಿರ್ನಾಮ || 1 ||
ವಾಮ ಉಗ್ರರ ಜಾತಿ ಛಿದ್ರರ ಶತ್ರು ಜನರ ಪಂಥಾಹ್ವಾನ
ಕ್ಷೀಣಿಸಿ ಸಂತತಿ ಪರಮತ ವೃದ್ಧಿ ಉತ್ತರ ಒಂದೇ ಜಾಗರಣ
ಸಂಸ್ಕೃತಿ ರಕ್ಷಣೆ ನಮ್ಮ ಪಣ
ಉನ್ಮತ್ತರ ಗಣ ನೆಲ ಕಚ್ಚುವ ಕ್ಷಣ ಭಾರ್ಗವವಿಲ್ಲಿ ಸಾಕಾರ
ಸಾತ್ವಿಕ ಶಕ್ತಿ ವಿಕಸಿತ ವ್ಯಕ್ತಿ ತಾಳಿದ ಸಂಘದ ಅವತಾರ
ಧರ್ಮ ಧರೆಗಿಳಿದು ವಿಶ್ವರೂಪವೇ ಆಗಿದೆ ಹಿಂದೂ ಸಂಗಮ || 2 ||