ಭಾರತ ವರಸಂತಾನ ನಾವು, ಭಾರತ ವರಸಂತಾನ || ಪ ||
ಕೆಚ್ಚೆದೆ ಕಲಿಗಳ ಕೂರಸಿ ಕಡಿತಕೆ ಸಾಸಿರ ಅರಿಶಿರ ಬಿದ್ದವು ನೆಲಕೆ
ಜಿತ ಭಗವಾಧ್ವಜ ಏರಿತು ನಭಕೆ, ದುಷ್ಟರ ರಿಪು ಬಲವಾನ ನಾವು || 1 ||
ರಕ್ಷಿತವಾದವು ದೇಶಗಳೆಲ್ಲ ಸ್ಥಿರಚರ ಹಿರಿಕಿರಿ ಜೀವಿಗಳೆಲ್ಲ
ಭಯಕಂಪಿತ ಶತ ಪಾಪಿಗಳೆಲ್ಲ, ಸಭ್ಯ ಪ್ರಭಾವಿ ಮಹಾನ ನಾವು || 2 ||
ವೇದದ ಗಾನವು ಹರಡಿತು ಭರದಿ, ಮೋಹ ಭ್ರಮೆಗಳು ಅಳಿದವು ಜಗದಿ
ಮನುಜತ್ವದ ಸಸಿ ಮೊಳೆಯಿತು ಮನದಿ, ವಿಶ್ವಕೆ ಗುರುಧೀಮಾನ ನಾವು || 3 ||
ಹಿಂದೂ ವೀರರ ಕೀರ್ತಿಯು ಬೀರಿ, ಅಚ್ಚರಿಗೊಂಡರು ಸುರಗಣ ಸೇರಿ
ಜಯ ಜಯ ಭಾರತವೆಂದರು ಸಾರಿ, ಪಡೆದೆವು ವರಸನ್ಮಾನ ನಾವು || 4 ||
ಭಾರತಮಾತೆಯ ಮೇಲ್ಮೆಗೆ ಸತತವು ಬಾಲಕ ಯುವಕರು ಪ್ರೌಢರು ದುಡಿವೆವು
ತನು ಮನ ಧನ ಜೀವನಗಳನಿಡುವೆವು ಕೊಡುವೆವು ವರಬಲಿದಾನ ನಾವು || 5 ||