ಭಾರತ ದೇಶದಿ ಜನಿಸುವ ಪುಣ್ಯವು ಜನುಮ

ಭಾರತ ದೇಶದಿ ಜನಿಸುವ ಪುಣ್ಯವು ಜನುಮ ಜನುಮದಲಿ
ಇರಲೆಮಗೆ
ಭಾರತ ಮಾತೆಯ ಸೇವೆಯ ಗೈಯುವ ಭಾಗ್ಯವು ದಿನದಿನ
ಬರೆಲೆಮಗೆ || ಪ ||

ಇಲ್ಲಿಯ ನಡೆನುಡಿ ವಿಶ್ವಕೆ ಮಾದರಿ ನೆಲವಿದು ಕಲೆಗಳ ತವರೂರು
ಬೇಲೂರಿನ ಗುಡಿ ಮಧುರೆಯ ಮಂದಿರ ಕುಶಲ ಕಲಾಕೃತಿಗಳ ಬೀಡು || 1 ||

ವಿಶ್ವೇಶ್ವರ ರಾಮಾನುಜರಂತೆ ಕುಶಲಮತಿಗಳುದಿಸಿಹರಿಲ್ಲಿ
ಭಾರತಮಾತೆಯ ಕೀರ್ತಿಯ ಶಿಖರಕೆ ಏರಿಸಿ ಹರುಷದಿ ಜಯಚೆಲ್ಲಿ || 2 ||

Leave a Reply

Your email address will not be published. Required fields are marked *