ದೂರ ತೀರದ ಶ್ವೇತ ಕುವರಿಗೆ ಏನು ಇಲ್ಲಿಯ ಚಿಂತನೆ
ವೀರ ಸಂತ ವಿವೇಕ ಶೋಧನೆ ಎಂಥ ಅದ್ಭುತ ಕಲ್ಪನೆ || ಪ ||
ಹಿಂದು ಸಂಸ್ಕೃತಿಯವಳ ಉಸಿರು ಭರತ ಖಂಡಕೆ ಸೋದರಿ
ದೀನ ದಲಿತರ ನೋಡುವಾ ಪರಿ ಎನಿತು ಕಾರ್ಯದ ವೈಖರಿ
ಪುಟ್ಟ ಬಾಲೆಯರವಳಿಗಕ್ಕರೆ ಜ್ಞಾನ ಬೆಳಗಿದ ಭವ್ಯ ತಾರೆ
ಸ್ತ್ರೀಗೆ ಶಿಕ್ಷಣ, ಸ್ವಾಭಿಮಾನವ ಸಾರಿ ಹೇಳಿದ ಶ್ವೇತ ಧಾರೆ || 1 ||
ಪ್ಲೇಗು ಮಾರಿ ಕಾಡಲಾಗ ಅಕ್ಕ ಆ ಕ್ಷಣ ಹಾಜರಿ
ದುಃಖತಪ್ತರ ಕಣ್ಣ ಒರಸಿ ಲೋಕಕಾದಳು ಮಾದರಿ
ದೇಶ ಪ್ರೇಮದ ನಂದಾ ದೀಪಕೆ ತೈಲವಾಯಿತು ವಾಗ್ಝರಿ
ಭಾರತೀಯರ ಹಿರಿಮೆ ಮೆರೆಸಿ ಅಮರಳಾದಳು ಕಿನ್ನರಿ || 2 ||
ಗುರುವಿನಾಣತಿಯಂತೆ ನಡೆವ ಪುಣ್ಯ ಜೀವಿಗೆ ವಂದನೆ
ನಮ್ಮ ಸೇವೆಗೆ ಜೀವ ತೇದಿಹ ಅಕ್ಕಗೊಂದು ನಿವೇದನೆ
ಭಾರತೀಯರ ಹರಸು ತಾಯೆ ಬೆಳಗಲೆಮ್ಮಯ ಸಾಧನೆ
ಅಗಲಿಂದು ಶೀಘ್ರವೀಗ ಭವ್ಯ ಭಾರತ ಕಲ್ಪನೆ || 3 ||