ಭಗವೆಯು ಹಾರಾಡುತಿದೆ

ಭಗವೆಯು ಹಾರಾಡುತಿದೆ ಆಹಹ್ಹಹಾ
ಜಗವೇ ತಲೆಬಾಗುತಿದೆ ಓಹೊಹ್ಹೊಹೋ
ಎಂಥ ಸಡಗರ……. ಎಂಥ ಸಂಭ್ರಮ
ಅಂತಿಮ ಜಯ ಸಾಧನೆಯ ಕ್ಷಣವು ಬಂದಿದೆ || ಪ ||

ಕಾಶ್ಮೀರ ನಮ್ಮದು ವರ ಹಿಮಾದ್ರಿ ನಮ್ಮದು
ಶ್ರೀರಾಮಕೃಷ್ಣರ ಜನ್ಮಭೂಮಿ ನಮ್ಮದು
ಶತ್ರುಗಳ ಹೊಂಚನು, ದ್ರೋಹಿಗಳ ಸಂಚನು
ಮಿಂಚಿನಂತೆ ಎರಗಿ ವಿಫಲಗೊಳಿಸಬನ್ನಿರಿ || 1 ||

ಮೆಟ್ಟಿಬನ್ನಿ ಭೇದಭಾವ ಒಂದೇ ಎಲ್ಲರೂ
ದೇವರ ಈ ನಾಡಿನಲ್ಲಿ ಸರಿಸಮಾನರು
ಸಂಘಟನೆಯ ಶಕ್ತಿಯು, ಇರಲು ರಾಷ್ಟ್ರಭಕ್ತಿಯು
ಸಕಲ ಸಂಕಷ್ಟನೀಗಿ ಬಂಧ ಮುಕ್ತಿಯು || 2 ||

ಪಾಶ್ಚಿಮಾತ್ಯ ಅಂಧಾನುಕರಣೆ ಏತಕೆ ?
ನವಭಾರತ ನಿರ್ಮಾಣಕೆ ಬೇಕು ಸ್ವಂತಿಕೆ
ಬೆಳೆಸಿ ಸ್ವಾಭಿಮಾನವ, ಮೊಳಗಿ ಐಕ್ಯಗಾನವ
ನಾವೆ ಜಗದ ಒಡೆಯರು ಇದೆಮ್ಮ ನಂಬಿಕೆ || 3 ||

Leave a Reply

Your email address will not be published. Required fields are marked *