ಬೆಳಕು ಒಂದು ಇಳೆಗೆ ಬಂದು ಇರುಳನೆಲ್ಲ ಕಳೆಯಿತು
ಧರೆಯ ಕಣದ ಬತ್ತಿ ಉರಿದು ಕೋಟಿ ಹಣತೆ ಬೆಳಗಿತು || ಪ ||
ಆತ್ಮ ಒಂದು ರೂಪುಗೊಂಡು ಹಿಂದು ಎದೆಯೊಳರಳಿತು
ಸಿಂಧು ಬಿಂದು ನೊಂದು ಬೆಂದು ಬಂದು ಮನವ ತಲುಪಿತು
ಮಂತ್ರ ಒಂದು ಜನಿಸಿತು, ಸಂಘಶಕ್ತಿ ಉದಿಸಿತು
ಕವಿದು ನಿಂತ ದಾಸ್ಯಛಾಯೆ, ಬಿಟ್ಟಿತೋ ತೊಲಗಿತು || 1 ||
ತತ್ವ ಒಂದು ಸಲಿಲವಾಗಿ ದೇಶವ್ಯಾಪಿ ಹರಿಯಿತು
ಹನಿಗಳೆಲ್ಲ ಒಂದುಗೂಡಿ ಹರಿವಿನಲ್ಲಿ ಮೊರೆಯಿತು
ಉಕ್ಕಿಹರಿವ ಸೆಳವಿನಲ್ಲಿ ಸೊಕ್ಕಿ ಬೆಳೆದ ಅಸುರಶಕ್ತಿ
ದಿಗಿಲುಬಿದ್ದು ರಕ್ತಕಾರಿ ಕೊಚ್ಚಿಹೋಯಿತು || 2 ||
ಜೀವ ಒಂದು ತುಡಿದು ಮಿಡಿದು ಅಮೃತವ ಕಡೆಯಿತು
ಸ್ವಾರ್ಥ ವಿಷವ ಹಿಡಿದು ಕುಡಿದು ಸನಿಹಕೆ ಕರೆಯಿತು
ಕನಸು ಒಂದು ನೆಮ್ಮಿತು, ದುಡಿದು ನನಸುಗೊಳಿಸಿತು
ರಾಷ್ಟ್ರಭಕಿ ಕಾರ್ಯಶಕ್ತಿ, ದುಂದುಭಿಯು ಮೊಳಗಿತು || 3 ||