ಬೇಕಾದದ್ದು ಬಿತ್ತಿ ಬೆಳೆದುಕೋ ಬಂಧು

ನಿನ್ನ ಗದ್ದೆಗೆ ನೀರು ತರುವ ನಾಲೆಗಳೆಲ್ಲ ಬಂದು, ಬೇಕಾದದ್ದು ಬಿತ್ತಿ ಬೆಳೆದುಕೋ ಬಂಧು

ಬೆನ್ಮೂಳೆ ಮುರಿದು ಬಳಿಕ ಬಡಕೊಳ್ಳುತ್ತೇನೆ ಬಾನುಲಿ ;
ಎರಡೂ ಕಾಲಿನ ಮೆಲೆ ನಿಲ್ಲಲೇ ಬೇಕೆಂಬ ತೊದಲುಲಿ
ಆನತಾ ವಿರೋಧಿದಳಗಳ ಪಿತೂರಿ.
ಕಾನೂನು ಮನ್ನಿಸುವ ಜನ ನಾಲ್ಕೂ ಕಾಲಲ್ಲಿ ನಡೆದರೇ
ಚಂದ, ಬೀಳುವಪಾಯ ಕಮ್ಮಿ,
ಸರ್ವದಾ ಸಾಷ್ಟಾಂಗ ಪ್ರಣಾಮದ್ದೇ ಭಂಗಿ.
ಹೇಳಿದ ಹಾಗೆ ಕೇಳಿ ಬಾಲ
ಮುದುರಿ ಕುಳಿತರೇನೇ ಲಾಭ :
ಹೊಟ್ಟೆಗಿಷ್ಟು ಹಿಟ್ಟು ಜುಟ್ಟಿಗೆ ಪ್ಲಾಸ್ಟಿಕ್ ಮಲ್ಲಿಗೆ
ಸಿಗುತ್ತದೆ ಹೆದರಬೇಡಿ ನಾಳೆಗೆ.
ಸ್ವಾತಂತ್ರೋತ್ಸವಕ್ಕೆ ತಲಾ ಒಂದು ಬೂಂದಿಕಾಳಿಗೆ
ಸರ್ವಾರ್ಪಣ ಕಲಿಯುವುದೆ ಹೀಗೆ ತಾಯಿ ಮಹಾಂ
ಕಾಳಿಗೆ . . . .

ಶ್ರೀ ಗೋಪಾಲಕೃಷ್ಣ ಅಡಿಗರ ರಚನೆ (ತುರ್ತು ಪರಿಸ್ಥಿತಿ ಹಾಡು – ಕವನ)

Leave a Reply

Your email address will not be published. Required fields are marked *