ಬನ್ನಿ ಹಿಂದು ತರುಣರೇ ಒಂದುಗೂಡಿ ಹಾಡುವಾ
ರಾಷ್ಟ್ರಕಾಗಿ ಬಾಳಿ ಬದುಕಿ ನವಚರಿತ್ರೆ ರಚಿಸುವಾ || ಪ ||
ಆಂಗ್ಲ ಮೊಗಲ ನಕ್ಸಲ ತುಂಬಿ ಶತ್ರು ಸಂಕುಲ
ಶತ್ರು ಸೈನ್ಯ ನುಗ್ಗಿ ಬರಲು ಕೆಡಹುದೊಂದೆ ಹಂಬಲ
ಸ್ವಾಭಿಮಾನ ದೇಶಪ್ರೇಮ ರುಧಿರಧಾರೆ ಹರಿಯಲಿ
ಕಷ್ಟನಷ್ಟವೇನೆ ಬರಲಿ ಹೃದಯಕಮಲ ಅರಳಲಿ || 1 ||
ಆಜಾದ ಧೀಂಗ್ರ ಭಗತರು ದೇಶಕಾಗಿ ಮಡಿದರು
ವಿವೇಕಾದಿ ಸಂತರು ಧರ್ಮಕಾಗಿ ದುಡಿದರು
ಕೇಶವ ಮಧು ಯಾದವರು ತರುಣ ತನುವ ತೇದರು
ಸಿಡಿಲ ಕಿಡಿಗಳಾಗಿ ನಾವು ರಾಷ್ಟ್ರ ಮಾನ ಕಾಯ್ವೆವು || 2 ||
ಕಬಡ್ಡಿ ಕಬಡ್ಡಿ ಆಟವಾಡಿ ಜಾತಿಭೇದ ಎಲ್ಲೆ ಮೀರಿ
ಹಿಂದು ಬಂಧು ಒಂದು ಎಂದು ಸಮರಸತೆಯ ಜಗಕೆ ಸಾರಿ
ಸಾಲು ಸಾಲು ಬೂಟುಗಾಲು ಒಂದೆ ಗುರಿಗೆ ನಡೆಯಲಿ
ಹೃದಯ ಹೃದಯ ಬೆಸೆದು ವಿರಾಟ್ ರಾಷ್ಟ್ರಪುರುಷನೇಳಲಿ || 3 ||
ನೂರು ಕಷ್ಟ ಸಹಿಸಿ ತಾಯಿ ಸುಖದಿ ನಮ್ಮ ಪೊರೆದಳು
ಶುದ್ಧ ಜಲವ ನೆಲವ ನೀಡಿ ನಮ್ಮ ಏಳ್ಗೆ ಕಂಡಳು
ದೇಶ ಸೇವೆಯೊಂದೆ ದಾರಿ ತಾಯಋಣದ ಕಳೆಯಲು
ಸಂಘಟನೆಯೆ ಮೂಲಮಂತ್ರ ಹಿಂದು ರಾಷ್ಟ್ರ ಕಟ್ಟಲು || 4 ||