ಬಂದಿದೆ ಬನ್ನಿ ಹುಟ್ಟಿದ ಹಬ್ಬ
ಪುಟ್ಟ ಬಾಲಕ ಹುಟ್ಟಿದ ಹಬ್ಬ
ರಾಮನು ಹುಟ್ಟಿದ ಹಬ್ಬ || ಪ ||
ಗೆಜ್ಜೆ ಕಟ್ಟಿ ಕುಣಿಯೋಣ ಬನ್ನಿ
ಕೈಯ ತಟ್ಟಿ ಹಾಡೋಣ ಬನ್ನಿ
ಶುಭಾಶಯವ ಹೇಳೋಣ ಬನ್ನಿ
ಬನ್ನಿ ಬನ್ನಿ ಸಂತೋಷದ ಹಬ್ಬ || 1 ||
ಬಾರಿಬಾರಿಗೂ ಇಂಥಾ ದಿನ ಬರಲಿ
ವರುಷ ವರುಷವೂ ಹರುಷವ ತರಲಿ
ನಮ್ಮ ಬಾಯಿ ಸಿಹಿಸಿಹಿಯಾಗಿರಲಿ
ಇಷ್ಟಮಿತ್ರರು ಸೇರುವ ಈ ಹಬ್ಬ || 2 ||
ಬಾಳೋ ಗೆಳೆಯ ನೂರು ವರುಷ
ಹಿರಿಯರ ಹರಕೆ ಸದ್ಗುಣ ವರ್ಷಾ
ಗಳಿಸಿ ಬೆಳಗಿಸು ಭಾರತದೇಶ
ತನುಮನ ಬೆಳೆಸುವಂಥಾ ಹಬ್ಬ || 3 ||