ಅನುಪಮ ಆದರ್ಶದ ನುಡಿಯೊಂದಕೆ

ಅನುಪಮ ಆದರ್ಶದ ನುಡಿಯೊಂದಕೆ
ದೊರೆತಿದೆ ಇಲ್ಲಿ ಉದಾಹರಣೆ
ಕ್ರಿಯಾಸಿದ್ಧಿಃ ಸತ್ತ್ವೇ ಭವತಿ ಮಹತಾಂ ನೋಪಕರಣೇ || ಪ ||

ಹಣವಿಲ್ಲ, ಹಣ ಬೆಂಬಲವಿಲ್ಲ ಅಧಿಕಾರದ ಅಂದಣವಿಲ್ಲ
ಬಣವಿಲ್ಲ ಜನ ಬೆಂಬಲವಿಲ್ಲ ಅನುಕೂಲತೆಗಳ ಸುಳಿವಿಲ್ಲ
ಕ್ಷಣವಾದರೂ ಬಿಡುವಿಲ್ಲದೆ ಕೇಶವ ಕಟ್ಟಿದ ಹಿಂದೂ ಸಂಘಟನೆ || 1 ||

ರಾಷ್ಟ್ರಭಕ್ತಿ ಸದ್ಗುಣಗಳನುಳಿಸದರೆ ಬಡತನವೇ ಮೈ ಮನೆಯೆಲ್ಲಾ
ಪದವಿ ಬೇರೆ ಪ್ರವೃತ್ತಿ ಬೇರೆ ಇದು ಪರಿಹಾಸ್ಯದ ನುಡಿ ಜನಕೆಲ್ಲಾ
ವ್ಯಂಗ್ಯ ವಿರೋಧವನೆದುರಿಸಿ ಕೇಶವ ಕಟ್ಟಿದ ಹಿಂದೂ ಸಂಘಟನೆ || 2 ||

ಸಾವಿರದಿತಿಹಾಸವ ಕಟ್ಟಿದ ಮನೆ ಬಾನೆತ್ತರ ಭೂಮಿಯ ಅಗಲ
ಶತಮಾನದ ದಾಸ್ಯದ ಬಿರುಗಾಳಿಗೆ ನಡುಗಿತು ನಡೆಯಿತು ಒಳಜಗಳ
ಪುನರಪಿ ಜೀರ್ಣೋದ್ಧಾರಕೆ ಕೇಶವ ಕಟ್ಟಿದ ಹಿಂದೂ ಸಂಘಟನೆ || 3 ||

Leave a Reply

Your email address will not be published. Required fields are marked *