ಅ ಆ ಇ ಈ ಕನ್ನಡದಾ ಅಕ್ಷರಮಾಲೆ

ಅ ಆ ಇ ಈ,
ಅ ಆ ಇ ಈ ಕನ್ನಡದಾ ಅಕ್ಷರಮಾಲೆ
ಅಮ್ಮಾ ಎಂಬುದೇ ಕಂದನ ಕರುಳಿನ ಕರೆಯೋಲೆ || ಪ ||

ಆಟ ಊಟ ಓಟ ಕನ್ನಡ ಒಂದನೇ ಪಾಠ
ಕನ್ನಡ ಭಾಷೆಯ ಕಲಿತವನಿಗೆ ಜೀವನವೇ ರಸದೂಟ || 1 ||

ಇ ಈ
ಇದ್ದವರೆಲ್ಲ ಇಲ್ಲದವರಿಗೆ ನೀಡಲೇಬೇಕು
ಈಶ್ವರನಲ್ಲಿ ಎಂದೂ ನಂಬಿಕೆ ಇಡಬೇಕು || 2 ||

ಉ, ಊ
ಉಪ್ಪು ತಿಂದ ಮನೆಗೆ ಎರಡು ಬಗೆಯಬೇಡ
ಊರಿಗೆ ದ್ರೋಹ ಮಾಡಿ ಬದುಕಲೆಣಿಸಬೇಡ || 3 ||

ಋ ಋ ಎ ಏ ಐ
ಭಾರತ ಮಾತೆಗೆ ಜೈ || 4 ||

ಒ ಓ
ಒಂದೇ ತಾಯಿಯ ಮಕ್ಕಳು ನಾವು ಒಂದುಗೂಡಬೇಕು
ಓದನು ಕಲಿತು ದೇಶದ ಸೇವೆಗೆ ನಿಲ್ಲಬೇಕು || 5 ||

ಔ ಅಂ ಅಃ

Leave a Reply

Your email address will not be published. Required fields are marked *